Lok Sabha Elections 2019 : ಕಾಂಗ್ರೆಸ್, ಜೆಡಿಎಸ್ ಸೀಟು ಚೌಕಾಶಿ ಶುರು | Oneindia Kannada

2018-06-04 813

Is bargain already started between Congress and JDS for the upcoming general election 2019 for seat sharing? As per some of the Kannada channels reports, JDS demanding for 10 constituencies and Congress is ready for 8.

ಹಾಲೀ ಹದಿನಾರನೇ ಲೋಕಸಭೆಯ ಅವಧಿ ಅಧಿಕೃತವಾಗಿ ಮುಗಿಯಲು ಇನ್ನೂ ಹೆಚ್ಚುಕಮ್ಮಿ ಒಂದು ವರ್ಷ ಬಾಕಿಯಿದೆ. ಇನ್ನೊಂದು ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಬಾರದೆಂದು, ಬಿಜೆಪಿಯೇತರ ಪಕ್ಷಗಳು ಕೈಜೋಡಿಸಲು ಆರಂಭಿಸಿವೆ. ಕೆಲವೊಂದು ಪಕ್ಷಗಳು ಎನ್ಡಿಎ ತೆಕ್ಕೆಯಿಂದ ಜಾರುತ್ತಿವೆ. ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಸಂಪುಟ ವಿಸ್ತರಣೆ ಇನ್ನೂ ಮುಗಿದಿಲ್ಲ. ಆದರೆ, ಈ ಮಧ್ಯೆ ಮುಂಬರುವ ಲೋಕಸಭಾ ಚುನಾವಣೆಗೆ ಸೀಟು ಹೊಂದಾಣಿಕೆಯ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಚೌಕಾಸಿ ಆರಂಭವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.